Skip to main content

ಸಾಮ್ರಾಟ ದಿಲೀಪಸಾಮ್ರಾಟ

ಸಾಮ್ರಾಟ ದಿಲೀಪ


ಮಿತ್ರರೇ, ಇದು ರಘುವಂಶದ ಸಾಮ್ರಾಟ ದಿಲೀಪನ ಕಥೆಯಾಗಿದೆ. ಶ್ರೀರಾಮ ಪ್ರಭುವಿನ ಜನ್ಮವೂ ರಘುವಂಶದಲ್ಲಿಯೇ ಆಯಿತು. ಪ್ರಭು ಶ್ರೀರಾಮನ ಜನ್ಮದ ಮೊದಲು ರಘುವಂಶದಲ್ಲಿ ಸಾಮ್ರಾಟ್ ದಿಲೀಪನೆಂಬ ಒಬ್ಬ ಮಹಾನ್ ಚಕ್ರವರ್ತಿ ಇದ್ದರು. ಸಾಮ್ರಾಟ ದಿಲೀಪನು ಗೋವ್ರತ ಆಚರಣೆಯನ್ನು ಮಾಡುತ್ತಿದ್ದನು. ಗೋವ್ರತದ ಅರ್ಥವೇನೆಂದರೆ, ಗೋವಿನ ಸೇವೆಯನ್ನು ಮಾಡುವುದು, ಅವುಗಳ ರಕ್ಷಣೆ ಮಾಡುವುದು. ತಮ್ಮ ಕುಲಗುರು ವಸಿಷ್ಠರ ಪೂಜ್ಯ ಗೋವು ನಂದಿನಿಯ ಸೇವೆಯನ್ನು ಮಾಡುತ್ತಿದ್ದನು. ಅವರು ನಂದಿನಿ ಹಸುವಿಗೆ ಎಳೆಯ ಹಸಿ ಹುಲ್ಲು ತಿನ್ನಿಸುತ್ತಿದ್ದನು, ಪ್ರೀತಿಯಿಂದ ಅದರ ಬೆನ್ನು ಮತ್ತು ಕುತ್ತಿಗೆಯನ್ನು ಸವರುತ್ತಿದ್ದನು; ಅದರ ಮೇಲೆ ಕುಳಿತುಕೊಳ್ಳುವ ಸೊಳ್ಳೆ- ನೊಣಗಳನ್ನು ಓಡಿಸುತ್ತಿದ್ದ. ನಂದಿನಿಯೊಂದಿಗೆ ಯಾವಾಗಲೂ ನೆರಳಿನಂತೆ ಇರುತ್ತಿದ್ದ. ಅದು ಕುಳಿತರೆ ಕುಳಿತುಕೊಳ್ಳುತ್ತಿದ್ದ, ಮತ್ತು ನಡೆಯತೊಡಗಿದರೆ ನಡೆಯುತ್ತಿದ್ದ.


ಒಂದು ದಿನ ಆ ನಂದಿನಿ ಹಸುವನ್ನು ಅರಣ್ಯದಲ್ಲಿ ಮೇಯಿಸಲು ಕರೆದುಕೊಂಡು ಹೋದನು. ಅರಣ್ಯದಲ್ಲಿ ಮೇಯಿಸುತ್ತಿರುವಾಗ, ಅಕಸ್ಮಿಕವಾಗಿ ಒಂದು ಬೃಹದಾಕಾರದ ಮಹಾಕ್ರೂರ ಸಿಂಹ ಸಾಮ್ರಾಟನ ಎದುರಿಗೆ ಬಂದು ನಿಂತಿತು. ಆ ಸಿಂಹವು ನಂದಿನಿ ಹಸುವನ್ನು ನೋಡಿತು ಮತ್ತು ಅದು ನಂದಿನಿಯನ್ನು ತಿನ್ನಲು ಅದರ ಮೇಲೆರೆಗುವುದರಲ್ಲಿತ್ತು. ರಾಜನು ಸಿಂಹವನ್ನು ನೋಡಿ ಹೆದರಲಿಲ್ಲ, ತಕ್ಷಣ ರಾಜನು ಧನುಸ್ಸಿಗೆ ಹೆದೆಯೇರಿಸಿ ಸಿಂಹದ ಮೇಲೆ ಗುರಿಯಿಟ್ಟ. ಆ ಕ್ರೂರ ಸಿಂಹವನ್ನು ‘ನೀನು ಹೊರಟು ಹೋಗು! ನಾನು ನಂದಿನಿಯ ರಕ್ಷಕನಾಗಿದ್ದೇನೆ ಹಾಗೂ ನಿನಗೆ ನಂದಿನಿಯನ್ನು ತಿನ್ನಲು ಬಿಡುವುದಿಲ್ಲ’ ಎಂದು ಹೇಳಿದನು. ಆಗ ಸಿಂಹವು ರಾಜನಿಗೆ ‘ರಾಜನ್ ನಾನಂತೂ ಹಸಿದಿದ್ದೇನೆ ಮತ್ತು ಈ ಹಸು ನನ್ನ ಭೋಜನವಾಗಿದೆ. ಆದ್ದರಿಂದ ನಾನು ಇದನ್ನು ಖಂಡಿತವಾಗಿಯೂ ತಿನ್ನುತ್ತೇನೆ’ ಎಂದು ಹೇಳಿತು. ಆಗ ಸಾಮ್ರಾಟ ದಿಲೀಪನು ‘ವನರಾಜ, ಒಂದು ವೇಳೆ ನಾನು ನಿನಗೆ ಹಸುವನ್ನು ತಿನ್ನಲು ಕೊಟ್ಟರೆ, ರಘುವಂಶದ ಕೀರ್ತಿ ಕಳಂಕಿತಗೊಳ್ಳುತ್ತದೆ. ಗೋರಕ್ಷೆಯೇ ನನ್ನ ಜೀವನದ ಕಾರ್ಯವಾಗಿದೆ. ಇದೇ ನನ್ನ ಧರ್ಮವಾಗಿದೆ. ಅಪಕೀರ್ತಿ ಹೊಂದಿದ ಈ ದೇಹದೊಂದಿಗೆ ಹಿಂತಿರುಗುವುದಕ್ಕಿಂತ ನಾನು ನನ್ನ ದೇಹವನ್ನು ನಿನಗೆ ಸಮರ್ಪಿಸುತ್ತೇನೆ. ಇಂದು ನೀನು ನನ್ನನ್ನು ನಿನ್ನ ಭೋಜನವನ್ನಾಗಿ ಸ್ವೀಕರಿಸು. ನಾನು ನನ್ನ ಶರೀರವನ್ನು ನಿನ್ನ ಭೋಜನಕ್ಕೆ ಒಪ್ಪಿಸುತ್ತೇನೆ’ ಎಂದು ಹೇಳಿ ಸಾಮ್ರಾಟನು ಸಿಂಹದ ಎದುರಿಗೆ ಹೋಗಿ ನಿಂತುಕೊಂಡನು. ಸಾಮ್ರಾಟನು ಮುಂದುವರಿದು ಆ ಸಿಂಹಕ್ಕೆ ‘ಸಿಂಹರಾಜಾ, ನನಗೆ ನಿನ್ನ ಮೇಲೆ ಕರುಣೆ ಬರುತ್ತಿದೆ, ಕ್ಷುದ್ರ ಗೋವಿಗಾಗಿ ಈ ಸಾಮ್ರಾಟನು ತನ್ನ ದೇಹವನ್ನು ನೀಡುತ್ತಿದ್ದಾನೆ. ಅವನು ಎಷ್ಟು ಮೂರ್ಖನಿದ್ದಾನೆ ಎಂದು. ನೀನು ವಿಚಾರ ಮಾಡುತ್ತಿರಬಹುದ ನನ್ನ ಶರೀರ ಹಾಗೂ ಜೀವನದ ಮೇಲೆ ನಿನಗೆ ದಯೆ ಬರುತ್ತಿರಬಹುದು. ಆದರೆ ಒಂದು ವೇಳೆ ನನ್ನ ಕಣ್ಣೆದುರಿಗೆ ನಂದಿನಿಯ ಹತ್ಯೆಯಾದರೆ, ನನ್ನ ರಘುವಂಶದ ಕೀರ್ತಿ ಕಳಂಕಿತಗೊಳ್ಳುವುದು. ನನ್ನ ಮೇಲೆ ದಯೆ ಮಾಡಲು ಇಚ್ಛಿಸಿದ್ದರೆ, ನನ್ನ ಶರೀರವನ್ನು ತಿಂದು ನಂದಿನಿಯನ್ನು ಮುಕ್ತಗೊಳಿಸು. ಇದರಿಂದ ನನ್ನ ಜಯಗಳಿಸಿದ ಶರೀರವು ಚಿರಂತನವಾಗುವುದು’ ಎಂದು ಹೇಳಿದನು.


ರಘುವಂಶದ ಶ್ರೇಷ್ಠ ಸಾಮ್ರಾಟ ದಿಲೀಪನು, ಹಸುವಿನ ರಕ್ಷಣೆಗಾಗಿ ಯೌವನದಿಂದ ತುಂಬಿದ್ದ ತನ್ನ ಶರೀರದ ಆಹುತಿಯನ್ನು ನೀಡಲು ಮುಂದಾಗಿದ್ದನು. ಸಿಂಹವು ಸಾಮ್ರಾಟನ ಈ ಮಾತುಗಳನ್ನು ಕೇಳಿ ಅರಣ್ಯಕ್ಕೆ ಮರಳಿ ಹೊರಟು ಹೋಯಿತು.


ಮಿತ್ರರೇ ಸಾಮ್ರಾಟ ದಿಲೀಪನು ಯುವ ಸಾಮ್ರಾಟ, ಸುಂದರ, ಶಕ್ತಿವಂತ ಹಾಗೂ ಕಾಂತಿಯುಕ್ತನಾಗಿದ್ದನು. ಅವನು ಪ್ರಜೆಗಳನ್ನು ಪಾಲಿಸುವವನು, ರಕ್ಷಿಸುವವನು ಮತ್ತು ಆಧಾರವೂ ಆಗಿದ್ದನು. ಆದರೆ ಗೋರಕ್ಷಣೆಗಾಗಿ ತನ್ನ ದೇಹವನ್ನು ಹುಲ್ಲಿನಂತೆ ಭಾವಿಸಿ ಸಿಂಹಕ್ಕೆ ಕೊಡಲು ಸಿದ್ಧನಾಗಿದ್ದನು.


ಬಾಲಮಿತ್ರರೇ, ಸಾಮ್ರಾಟ ದಿಲೀಪನು ಸಾಗರದ ವರೆಗೆ ವಿಸ್ತಾರವಾಗಿದ್ದ ಭೂಮಿಯ ಏಕಮಾತ್ರ ಸ್ವಾಮಿ, ಸಾರ್ವಭೌಮ, ಕೈಗೆತ್ತಿಕೊಂಡ ಕಾರ್ಯವನ್ನು ಪೂರ್ಣಗೊಳಿಸುವವನು, ರಥದಲ್ಲಿ ಸ್ವರ್ಗದ ವರೆಗೆ ಯಾತ್ರೆ ಮಾಡುವವನು, ದೇವರಾಜ ಇಂದ್ರನ ಸಹಪಾಠಿ, ಕ್ಷತ್ರಿಯರಿಗೆ ಉಚಿತವಾದ ಅಗ್ನಿಹೋತ್ರವನ್ನು ವಿಧಿವತ್ತಾಗಿ ಮಾಡುವವನು, ಬೇಡುವವರ ಮನೋಕಾಮನೆಯನ್ನು ಆದರಪೂರ್ವಕ ಪೂರ್ಣಗೊಳಿಸುವವನು, ಅಪರಾಧಿಗಳಿಗೆ ಸೂಕ್ತ ದಂಡನೆಯನ್ನು ನೀಡುವವನು, ದಾನಕ್ಕಾಗಿ ಧನಸಂಗ್ರಹವನ್ನು ಮಾಡುವವನು, ಮುಖದಿಂದ ಯಾವಾಗಲೂ ಸತ್ಯ ಹೇಳುವ ಮಿತಭಾಷಿ, ನಿತ್ಯ ವಿಜಯದ ಅಭಿಲಾಷೆಯೊಂದಿಗೆ ಗ್ರಹಸ್ಥಾಶ್ರಮವನ್ನು ಉತ್ತಮವಾಗಿ ಪಾಲಿಸುವವನು, ಜೀವನದ ಉತ್ತರಕಾಲದಲ್ಲಿ ಮುನಿಸಮಾನ ವಾನಪ್ರಸ್ಥದ ಜೀವನ ಜೀವಿಸುವವನಾಗಿದ್ದನು. ಇಷ್ಟು ದೊಡ್ಡ ಸಾಮ್ರಾಟನ ತ್ಯಾಗವನ್ನು ನೋಡಿ ಸಿಂಹವೂ ತಲೆತಗ್ಗಿಸಿ ಮರಳಿ ಹೋಯಿತು. ನಾವೂ ಸಹ ತ್ಯಾಗದ ಭಾವನೆಯನ್ನು ಜಾಗೃತಗೊಳಿಸಬೇಕು. 

Comments

Popular posts from this blog

ದ್ರೌಪದಿಯ ಪಾತ್ರೆ !

ಲಸಂಸ್ಕಾರ  >  ಸಣ್ಣ ನೀತಿ ಕಥೆಗಳು  >  ಇತರ ಕಥೆಗಳು  >  ದ್ರೌಪದಿಯ ಪಾತ್ರೆ ! ದ್ರೌಪದಿಯ ಪಾತ್ರೆ ಬಾಲಮಿತ್ರರೇ, ನಿಮಗೆ ಮಹಾಭಾರತದ ಕೌರವರು ಹಾಗೂ ಪಾಂಡವರ ಬಗ್ಗೆ ತಿಳಿದಿರಬಹುದು. ಕೌರವರ ಯುವರಾಜ ದುರ್ಯೋಧನ ಹಾಗೂ ಅವನ ಮಾಮ ಶಕುನಿಯು ಕಪಟದಿಂದ ಪಾಂಡವರ ರಾಜ್ಯವನ್ನು ಕಸಿದುಕೊಂಡಿದ್ದರು. ಹಾಗೂ ಅವರನ್ನು ೧೨ ವರ್ಷಗಳ ವನವಾಸ ಹಾಗೂ ೧ ವರ್ಷದ ಅಜ್ಞಾತವಾಸಕ್ಕಾಗಿ ಕಳಿಸಿದರು. ಈ ವಿಷಯ ಪಾಂಡವರ ವನವಾಸದ ಸಮಯದ್ದಾಗಿದೆ. ಕುರುಡನಾಗಿದ್ದ ಧೃತರಾಷ್ಟ್ರನು ಹಸ್ತಿನಾಪುರದ ರಾಜನಾಗಿದ್ದನು. ಇದರಿಂದಾಗಿ ದೃತರಾಷ್ಟ್ರನ ಮಗ ದುರ್ಯೋಧನನ ಕೈಯಲ್ಲಿ ರಾಜ್ಯದ ಕಾರ್ಯಭಾರವಿತ್ತು. ಒಂದು ಬಾರಿ ಮಹರ್ಷಿ ದೂರ್ವಾಸರು ಆಕಸ್ಮಿಕವಾಗಿ ಕೌರವರ ದರಬಾರಿಗೆ ಬಂದರು. ಮಹರ್ಷಿ ದೂರ್ವಾಸರು ಮುಂಗೋಪಿ ಎಂದು ತ್ರಿಲೋಕದಲ್ಲಿ ಎಲ್ಲರಿಗೂ ತಿಳಿದಿತ್ತು. ಮಹರ್ಷಿ ದೂರ್ವಾಸರ ಎದುರು ಏನಾದರೂ ಅಯೋಗ್ಯವಾಗಿರುವುದು ಘಟಿಸಿದರೆ ಅಥವಾ ಅವರ ಅನಾದರವಾದರೆ ಅವರು ಕೂಡಲೇ ಸಿಟ್ಟಿಗೊಳಗಾಗುತ್ತಿದ್ದರು. ಹಾಗೂ ಅವರು ಎದುರಿನಲ್ಲಿರುವವನಿಗೆ ಆ ಕ್ಷಣದಲ್ಲೇ ಶಾಪವನ್ನು ಕೊಡುತ್ತಿದ್ದರು. ಮಹರ್ಷಿ ದೂರ್ವಾಸರು ಆಕಸ್ಮಿಕವಾಗಿ ಹಸ್ತಿನಾಪುರಕ್ಕೆ ಆಗಮಿಸಿದ್ದರು. ಆದರೆ ದುರ್ಯೋಧನನು ಅವರಿಗೆ ಯೋಗ್ಯವಾದ ಆದರಾತಿಥ್ಯವನ್ನು ಮಾಡಿದನು. ಅವರ ಸ್ನಾನ, ಸಂಧ್ಯಾ, ಭೋಜನ, ನಿದ್ರೆ ಹಾಗೂ ಯೋಗ್ಯ ಆಯೋಜನೆಗಳನ್ನು ಮಾಡಿ ಅವರನ್ನು ಸತ್ಕರಿಸಿದನು. ಅವರಿಗೆ ಯಾವುದೇ ವಿಷಯದ ಕೊರತೆಯು ಅ

ಸಿ ಸುಬ್ರಹ್ಮಣ್ಯಂ( ಹಸಿರು ಕ್ರಾಂತಿ)

  ಭಾರತದಲ್ಲಿ ಹಸಿರು ಕ್ರಾಂತಿಯನ್ನು ಉಂಟು ಮಾಡಿದ ಪ್ರತಿಭಾವಂತ ರಾಜಕಾರಣಿ ಹೋರಾಟಗಾರರು ಆಡಳಿತಗಾರರು ದಾದಾ ಸಿ  ಸುಬ್ರಹ್ಮಣ್ಯಂ ನವರು ಚೆಂಗುಟ್ಟಪಕಾಯಂ ಎಂಬಲ್ಲಿ ಜನಿಸಿದರು ಅವರ ಪರಿವಾರದವರು ಹತ್ತಿ ಮತ್ತು ನೆಲಗಡಲೆ ಗಿರಣಿಗಳನ್ನು ನಡೆಸುತ್ತಿದ್ದರು ಇಡೀ ಹಳ್ಳಿಯಲ್ಲಿ ಕೇವಲ ಒಬ್ಬರು ಶಿಕ್ಷಕರಿದ್ದರು. ಸುಬ್ರಹ್ಮಣ್ಯಂರವರು ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು ಪೊಲ್ಲಾಚಿಯಲಿ ಪ್ರೌಢ ಶಿಕ್ಷೆ ಪಡೆದು ಮದ್ರಾಸಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮತ್ತು ಕಾನೂನು ಪದವಿ ಪಡೆದರು ಕೊಯಿಮತ್ತೂರಿನಲಿ ವಕೀಲ ವೃತ್ತಿಯನ್ನು ಆರಂಭಿಸಿದರು. ಸುಬ್ರಹ್ಮಣ್ಯಂರವರ ಚಿಕ್ಕಪ್ಪ ರಾಮಕೃಷ್ಣ ಪರಮಹಂಸರ ಪ್ರಭಾವದಿಂದಾಗಿ ಸನ್ಯಾಸಿಯಾಗಿ ಚಿದಾನಂದ ರೆಂದು ಹೆಸರು ಪಡೆದರು ತಮಿಳುನಾಡಿನ ಖ್ಯಾತ ಕವಿ ಸುಬ್ರಹ್ಮಣ್ಯ ಭಾರತೀಯರ ದೇಶ ಭಕ್ತಿ ಗೀತೆಗಳ ಪ್ರಭಾವ ಸಹ ಅಧಿಕವಾದಾಗ ಸುಬ್ರಹ್ಮಣ್ಯಂರವರು ಸ್ವಾತಂತ್ರ್ಯ ಆಂದೋಲನ ಏರಿದರು ಆನಂತರ ಅಸಹಕಾರ ಚಳುವಳಿ ಆರಂಭಿಸಿದರು ಚಲೆ ಜಾವ ಚಳುವಳಿಯ ವರೆಗಿನ ಎಲ್ಲ ಸತ್ಯಾಗ್ರಹಗಳಲ್ಲಿ ಸುಬ್ರಹ್ಮಣ್ಯಂ ಭಾಗವಹಿಸಿದರು ಅನೇಕ ಬಾರಿ ಸೇರಿ ಮನೆಗೆ ಕಳುಹಿಸಲ್ಪಟ್ಟರು 1947 ರಲ್ಲಿ ಭಾರತವು ಸ್ವತಂತ್ರವೇ ನಿಸಿದಾಗ ಸಿ ಸುಬ್ರಹ್ಮಣ್ಯಂ ಕೇಂದ್ರದಲ್ಲಿ ಮಂತ್ರಿಗಳಾಗಿ ಉಕ್ಕು ಮತ್ತು ಕಬ್ಬಿನ ಖಾತೆಯನ್ನು ನೋಡಿಕೊಂಡಿದ್ದರು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಂತ್ರಿಮಂಡಲದಲ್ಲಿ ಸಚಿವರಾದರು 1952 ರಲಿ ಹತ್ತು ವರ್ಷ ತಮಿಳುನಾ

ಸುಭಾಷ್ ಚಂದ್ರ ಬೋಸ್

  ಭಾರತದಿಂದ ಬ್ರಿಟಿಷರನ್ನು ಬಿಟ್ಟುಹೋಗುವಂತೆ ಮಾಡಲು ಕ್ರಾಂತಿ ಮಾರ್ಗವೇ ಸರಿಯಾದದ್ದು ದೇಶ ಪ್ರೇಮಿಗಳಿಗೆ ನನಗೆ ನಿಮ್ಮ ಶಕ್ತಿಯನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಘೋಷಣೆ ಮಾಡಿದ ವೀರರು ಸುಭಾಷ್ ಚಂದ್ರ ಬೋಸರು ಭಾರತೀಯರನ್ನು ಬಡಿದೆಬ್ಬಿಸಿದ ಪ್ರಚಂಡ ಸೇನಾನಿ ಸುಭಾಚಂದ್ರಬೋಸ್ ಸಾಹಸಸಿಂಹ ಎಂದೆನಿಸಿದರು. ಸುಭಾಷ್ ಚಂದ್ರರು ಜನವರಿ ತಿಂಗಳು 23ನೇ ದಿನಾಂಕ 1897 ನೇ ಇಸವಿಯಂದು ಒರಿಸ್ಸಾ ರಾಜ್ಯದ ಕಟಕದಲ್ಲಿ ಜನಸಿದರು ಇವರ ತಾಯಿ-ತಂದೆಯರು ಬಂಗಾಳಿ ಪರವಾಗಿದ್ದರು ಜಾನಕಿನಾಥ ಮತ್ತು ಪ್ರಭಾವತಿ ದೇವಿಯವರ ಮಗನಾಗಿದ್ದ ಸುಭಾಸಷ ಚಂದ್ರ 6ನೇ ಮಗನಾಗಿದ್ದರು ಈ ತಂಪ ತಿಗಳಿಗೆ 14 ಮಕ್ಕಳಿದ್ದರು. ಜಾನಕಿ ನಾಥರು ಅಭಿಮಾನಿಯಾಗಿದ್ದು ನ್ಯಾಯಾಧೀಶರನ್ಯಾಯಾಧೀಶರೊಂದಿಗೆ ಮನಸ್ತಾಪ ವಾದ ಕಾರಣ ವಕೀಲ ವೃತ್ತಿಯನ್ನು ಬಿಟ್ಟು ಕಲ್ಕತ್ತಾಗೆ ಹೋದರು ಬಾಲಕ ಸುಭಾಷ್ ಆಂಗ್ಲೋ ಇಂಡಿಯನ್ ಶಾಲೆಯಲ್ಲಿ ಕಲಿಕೆ ಆರಂಭಿಸಿದನು. ಹಿಂದೂ ಸಂಸ್ಕೃತಿಯಲ್ಲಿ ಅಪಾರ ಶ್ರದ್ಧೆ ಹೊಂದಿದ್ದ ಸುಭಾಷ್ ಚಂದ್ರರು ರಾಜಾರಾಮ್ ಮೋಹನ್ ರಾಯ್ ಶ್ರೀ ಕೃಷ್ಣ ಪರಮಹಂಸ ಈಶ್ವರಚಂದ್ರ ವಿದ್ಯಾಸಾಗರ ಮುಂತಾದವರಲ್ಲಿ ವಿಶೇಷವಾದ ಭಕ್ತಿ ಹೊಂದಿದ್ದರು. ವಿವೇಕಾನಂದರನು ಗೌರವಿಸುತ್ತಿದ್ದರು. ಆಂಗ್ಲ ಭಾಷೆಯೊಂದಿಗೆ ಭಾರತದ ಇತಿಹಾಸವನ್ನು ಪ್ರೀತಿಯಿಂದ ಅಭ್ಯಾಸ ಮಾಡಿದರು. ಪ್ರೌಢಶಾಲೆಯ ಶಿಕ್ಷಣದ ನಂತರ ಕಲ್ಕತ್ತೆಯ ಪ್ರೆಸಿಡೆನ್ಸಿ ಮಹಾ ವಿದ್ಯಾಲಯದಲ್ಲಿ ಬಿಎ ಪರೀಕ್ಷೆಯಲ್ಲಿ ಉತ್ತೀ