ಭಾರತದಿಂದ ಬ್ರಿಟಿಷರನ್ನು ಬಿಟ್ಟುಹೋಗುವಂತೆ ಮಾಡಲು ಕ್ರಾಂತಿ ಮಾರ್ಗವೇ ಸರಿಯಾದದ್ದು ದೇಶ ಪ್ರೇಮಿಗಳಿಗೆ ನನಗೆ ನಿಮ್ಮ ಶಕ್ತಿಯನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಘೋಷಣೆ ಮಾಡಿದ ವೀರರು ಸುಭಾಷ್ ಚಂದ್ರ ಬೋಸರು ಭಾರತೀಯರನ್ನು ಬಡಿದೆಬ್ಬಿಸಿದ ಪ್ರಚಂಡ ಸೇನಾನಿ ಸುಭಾಚಂದ್ರಬೋಸ್ ಸಾಹಸಸಿಂಹ ಎಂದೆನಿಸಿದರು.
ಸುಭಾಷ್ ಚಂದ್ರರು ಜನವರಿ ತಿಂಗಳು 23ನೇ ದಿನಾಂಕ 1897 ನೇ ಇಸವಿಯಂದು ಒರಿಸ್ಸಾ ರಾಜ್ಯದ ಕಟಕದಲ್ಲಿ ಜನಸಿದರು ಇವರ ತಾಯಿ-ತಂದೆಯರು ಬಂಗಾಳಿ ಪರವಾಗಿದ್ದರು ಜಾನಕಿನಾಥ ಮತ್ತು ಪ್ರಭಾವತಿ ದೇವಿಯವರ ಮಗನಾಗಿದ್ದ ಸುಭಾಸಷ ಚಂದ್ರ 6ನೇ ಮಗನಾಗಿದ್ದರು ಈ ತಂಪ ತಿಗಳಿಗೆ 14 ಮಕ್ಕಳಿದ್ದರು.
ಜಾನಕಿ ನಾಥರು ಅಭಿಮಾನಿಯಾಗಿದ್ದು ನ್ಯಾಯಾಧೀಶರನ್ಯಾಯಾಧೀಶರೊಂದಿಗೆ ಮನಸ್ತಾಪ ವಾದ ಕಾರಣ ವಕೀಲ ವೃತ್ತಿಯನ್ನು ಬಿಟ್ಟು ಕಲ್ಕತ್ತಾಗೆ ಹೋದರು ಬಾಲಕ ಸುಭಾಷ್ ಆಂಗ್ಲೋ ಇಂಡಿಯನ್ ಶಾಲೆಯಲ್ಲಿ ಕಲಿಕೆ ಆರಂಭಿಸಿದನು.
ಹಿಂದೂ ಸಂಸ್ಕೃತಿಯಲ್ಲಿ ಅಪಾರ ಶ್ರದ್ಧೆ ಹೊಂದಿದ್ದ ಸುಭಾಷ್ ಚಂದ್ರರು ರಾಜಾರಾಮ್ ಮೋಹನ್ ರಾಯ್ ಶ್ರೀ ಕೃಷ್ಣ ಪರಮಹಂಸ ಈಶ್ವರಚಂದ್ರ ವಿದ್ಯಾಸಾಗರ ಮುಂತಾದವರಲ್ಲಿ ವಿಶೇಷವಾದ ಭಕ್ತಿ ಹೊಂದಿದ್ದರು. ವಿವೇಕಾನಂದರನು ಗೌರವಿಸುತ್ತಿದ್ದರು.
ಆಂಗ್ಲ ಭಾಷೆಯೊಂದಿಗೆ ಭಾರತದ ಇತಿಹಾಸವನ್ನು ಪ್ರೀತಿಯಿಂದ ಅಭ್ಯಾಸ ಮಾಡಿದರು. ಪ್ರೌಢಶಾಲೆಯ ಶಿಕ್ಷಣದ ನಂತರ ಕಲ್ಕತ್ತೆಯ ಪ್ರೆಸಿಡೆನ್ಸಿ ಮಹಾ ವಿದ್ಯಾಲಯದಲ್ಲಿ ಬಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮಹಾವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರು ಭಾರತವನ್ನು ನಿಂದಿಸಿದಾಗ ಅವರು ಮೇಲೆ ಹಲ್ಲೆ ಮಾಡಿದ ಸುಭಾಶ್ಚಂದ್ರ ರಲ್ಲಿ ಕ್ರಾಂತಿಯ ಭಾವನೆ ಆಗಲೇ ಬೇರೂರಿತ್ತು.
ವಿವೇಕಾನಂದರ ಏಳಿ ಎದ್ದೇಳಿ ಎಚ್ಚರಗೊಳ್ಳಿ ದೇಶಕ್ಕಾಗಿ ಹೋರಾಡಿರಿ ಸುಭಾಶ್ಚಂದ್ರರಿಗೆ ದಿವ್ಯ ಮಂತ್ರ ಎನಿಸಿದವು ಇಂಗ್ಲೆಂಡಿಗೆ ಹೋಗಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮರಳಿದ ಸುಭಾಷ್ ಚಂದ್ರು ಬ್ರಿಟಿಷ್ ಸರ್ಕಾರದಲ್ಲಿ ಉತ್ತಮ ಹೊಂದಬಹುದಾಗಿತ್ತು ಆದರೆ ಅವರು ಸ್ವಾತಂತ್ರ್ಯ ಹೋರಾಟವನ್ನು ಆರಿಸಿಕೊಂಡರು. ಭಾರತದಲ್ಲಿ ಕಾಂಗ್ರೆಸ್ ಸಂಸ್ಥೆ ಆರಂಭವಾಗಿ ಸ್ವಾತಂತ್ರ್ಯ ಗಳಿಸಲು ಅನೇಕ ಕಾರ್ಯಗಳನ್ನು ಆರಂಭಿಸಿತು ದಕ್ಷಿಣ ಆಫ್ರಿಕಾದಿಂದ ಮರಳಿದ ಗಾಂಧೀಜಿ ಯವರು ಸಹ ಕಾಂಗ್ರೆಸ ಸೇರಿ ಮುಂದಾಳು ವಾದರೂ. ಸುಭಾಸ ಚಂದ್ರರು ಸಹ ಚಳುವಳಿ ಸೇರಿದರು ಗಾಂಧೀಜಿ ಶಾಂತಿ ಮಾರ್ಗ ಸುಭಾಷರಿಗೆ ಹಿಡಿಸಲಿಲ್ಲ ಸುಭಾಷ್ ಚಂದ್ರರು ದೇಶಬಂದು ಚಿತ್ತರಂಜನ ದಾಸರನ್ನು ಗುರುವನ್ನಾಗಿ ಸ್ವೀಕರಿಸಿದರು ಭಾರತಕ್ಕೆ ಪ್ರಿನ್ಸ್ ಆಫ್ ವೇಲ್ಸ್ ಬರುವಾಗ ಚಳುವಳಿ ನಡೆಸಿ ಸಸುಭಾಷ ಚಂದ್ರರು ಜೈಲು ಸೇರಿದರು ಸೆರೆಮನೆಯಿಂದ ಹೊರಬಂದ ಚಿತ್ತರಂಜನ್ ದಾಸರು ಕಲ್ಕತ್ತೆಯ ಮೇಯರಾದಾಗ ಶುಭಾಷ್ ಮುಖ್ಯ ಅಧಿಕಾರಿಗಳು ಯಾಗಿ ಸೇವೆಸಲ್ಲಿಸಿದರು ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವಾತಂತ್ರ್ಯ ವನ್ನು ಪಡೆಯುವ ಗೊತ್ತುವಳಿಯನ್ನು ಕಾಂಗ್ರೆಸ್ ಸ್ವೀಕರಿಸಿತ್ತು ಈ ಮಧ್ಯ ಆರೋಗ್ಯ ಸುಧಾರಣೆಗೆ ಆರೋಪಿಗೆ ತೆರಳಿದ ಸುಭಾಷ್ ಚಂದ್ರರು ಸ್ವಿಜರಲ್ಯಾಂಡ್, ಪ್ರಾನ್ಸ್, ಇಟಲಿ, ಜರ್ಮನಿ ಗಳಿಗೆ ಭೇಟಿಯಾದರು ಕಾಂಗ್ರೆಸ್ ಅಧ್ಯಕ್ಷರಾದ ಸುಭಾಷ್ ಚಂದ್ರ ರು ಹರಿಪುರದಲ್ಲಿ "ನಮ್ಮ ಹೋರಾಟ ಬ್ರಿಟಿಷ್ ಸರ್ಕಾರದೊಂದಿಗೆ ಬ್ರಿಟಿಷ್ ಜನತೆಯೊಂದಿಗೆ ನಮ್ಮ ವಿರೋಧವಿಲ್ಲ" ಎಂದು ಸಾರಿದರು ಹಿಂದೂ ಐಕ್ಯತೆಗಾಗಿ ದೇಶದಲ್ಲಿ ಸಂಚಾರ ಮಾಡಿದರು ಯುವಜನರ ನಾಯಕರೆನಿಸಿದ ಸುಭಾಷ್ ಚಂದ್ರರು ನಿಧಾನಗತಿಯನ್ನು ವಿರೋಧಿಸಿದರು ಗಾಂಧೀಜಿಯವರು ಸತ್ಯ, ಅಹಿಂಸೆ , ಸತ್ಯ ಗ್ರಹಗಳನ್ನು ಅಸ್ತ್ರಗಳಾಗಿ ಸಿ ಕೊಂಡಾಗ ಸುಭಾಶ್ಚಂದ್ರರು ಹಿಂಸೆ ಕ್ರಾಂತಿಗಳನ್ನು ನಂಬಿದರು, ಹೀಗೆ ಕಾಂಗ್ರೆಸ್ ಇಬ್ಭಾಗವಾಯಿತು.
ಸುಭಾಷ್ ಚಂದ್ರರು ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷ ಸ್ಥಾಪಿಸಿದರು ಎರಡನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರಿಗೆ ನೆರವು ನೀಡದೆ ಚಳುವಳಿ ನಡೆಸಿ ಬಂಧಿತರಾದರು. 1941 ರಲ್ಲಿ ವೇಷ ಬದಲಿಸಿ ಬರ್ಲಿನ್ ನಗರಕ್ಕೆ ಹೋದರು ಜರ್ಮನಿಯಲ್ಲಿ ಚಿಕ್ಕ ಸೇನೆಯನೂ ಕಟ್ಟಿದ ಸುಭಾಷ್ ಚಂದ್ರ ಅದಕ್ಕೆ ಆಜಾದ್ ಹಿಂದ್ ಫೌಜ್ ಎಂದು ಕರೆದರು ಅನುನಾಯಿಗಳು ಸುಭಾಷ್ ಚಂದ್ರನನ್ನು ನೇತಾಜಿ ಎಂದು ಕರೆದವರು ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಪೇನ್ ಕೆಲ್ ರನ್ನು ಮದುವೆಯಾದರು ಅನಿತಾ ಎಂಬ ಮಗಳನ್ನು ಪಡೆದರು ಜಪಾನಿಗೆ ಭೇಟಿನೀಡಿ ಇಂಡಿಯನ್ ಇಂಡಿಪೆಂಡೆನ್ಸ್ ಲಿಗ್ ಸ್ಥಾಪಿಸಿ ಅದರ ಅಧ್ಯಕ್ಷರಾದರು. 1942 ರಲ್ಲಿ ಸಿಂಗಪುರಕ್ಕೆ ತೆರಳಿ ಸೈನ್ಯ ಸಂಗ್ರಹಿಸಿದರು ಇಂಡಿಯನ್ ನ್ಯಾಷನಲ್ ಆರ್ಮಿ ಎಂದು ಕರೆದ ಈ ಸೇನೆಯಲ್ಲಿ 30 ಸಾವಿರ ಸೈನಿಕರಿದ್ದರು ಗುಲಾಮರಂತೆ ನೂರು ವರ್ಷ ಬಾಳುವುದಕ್ಕಿಂತ ಸ್ವತಂತ್ರರಾಗಿ ಒಂದು ವರ್ಷ ಬಾಳುವುದೇ ಲೇಸು ಎಂದು ಭಾವಿಸಿದ ಸುಭಾಷ್ ಚಂದ್ರರು ಜೈಹಿಂದ್ ಘೋಷಣೆಯನ್ನು ಆರಂಭಿಸಿದರು ಬರ್ಮಾದ ಕಡೆಯಿಂದ ನುಗ್ಗಿದ ಸುಭಾಷ್ ರ ಸೈನ್ಯ ಆಹಾರದ ಕೊರತೆ ಯುದ್ಧೋಪಕರಣಗಳ ಕೊರತೆಯನ್ನು ಅನುಭವಿಸಿತ್ತು ಮಹಾಯುದ್ಧದಲ್ಲಿ ಜರ್ಮನಿ ಜಪಾನ ಗಳಿಗೆ ಸೋಲಾಯಿತು1945ರಲಿ ಯುದ್ಧೋಪಕರಣಗಳನ್ನು ತರಲು ವಿಮಾನದಲ್ಲಿ ಹೊರಟರು ಅದೇ ಸಮಯದಲ್ಲಿ ಅಪಘಾತದಲ್ಲಿ ಸುಭಾಶ್ಚಂದ್ರರು ಇಲ್ಲವಾದರೂ ತರುಣ ಪೀಳಿಗೆಯನ್ನು ಧೀರ ನೇರ ಮಾತೃ ಕೃತಿಗಳಿಂದ ಸೆಳೆತ ಸುಭಾಷ್ ಚಂದ್ರ ಅಪಾರವಾದ ದೇಶಾಭಿಮಾನವನ್ನು ತೋರಿದರು ಅವರ ಹೋರಾಟ ರೋಮಾಂಚನ ತರುವುದು.
Comments
Post a Comment