ಲಸಂಸ್ಕಾರ > ಸಣ್ಣ ನೀತಿ ಕಥೆಗಳು > ಇತರ ಕಥೆಗಳು > ದ್ರೌಪದಿಯ ಪಾತ್ರೆ ! ದ್ರೌಪದಿಯ ಪಾತ್ರೆ ಬಾಲಮಿತ್ರರೇ, ನಿಮಗೆ ಮಹಾಭಾರತದ ಕೌರವರು ಹಾಗೂ ಪಾಂಡವರ ಬಗ್ಗೆ ತಿಳಿದಿರಬಹುದು. ಕೌರವರ ಯುವರಾಜ ದುರ್ಯೋಧನ ಹಾಗೂ ಅವನ ಮಾಮ ಶಕುನಿಯು ಕಪಟದಿಂದ ಪಾಂಡವರ ರಾಜ್ಯವನ್ನು ಕಸಿದುಕೊಂಡಿದ್ದರು. ಹಾಗೂ ಅವರನ್ನು ೧೨ ವರ್ಷಗಳ ವನವಾಸ ಹಾಗೂ ೧ ವರ್ಷದ ಅಜ್ಞಾತವಾಸಕ್ಕಾಗಿ ಕಳಿಸಿದರು. ಈ ವಿಷಯ ಪಾಂಡವರ ವನವಾಸದ ಸಮಯದ್ದಾಗಿದೆ. ಕುರುಡನಾಗಿದ್ದ ಧೃತರಾಷ್ಟ್ರನು ಹಸ್ತಿನಾಪುರದ ರಾಜನಾಗಿದ್ದನು. ಇದರಿಂದಾಗಿ ದೃತರಾಷ್ಟ್ರನ ಮಗ ದುರ್ಯೋಧನನ ಕೈಯಲ್ಲಿ ರಾಜ್ಯದ ಕಾರ್ಯಭಾರವಿತ್ತು. ಒಂದು ಬಾರಿ ಮಹರ್ಷಿ ದೂರ್ವಾಸರು ಆಕಸ್ಮಿಕವಾಗಿ ಕೌರವರ ದರಬಾರಿಗೆ ಬಂದರು. ಮಹರ್ಷಿ ದೂರ್ವಾಸರು ಮುಂಗೋಪಿ ಎಂದು ತ್ರಿಲೋಕದಲ್ಲಿ ಎಲ್ಲರಿಗೂ ತಿಳಿದಿತ್ತು. ಮಹರ್ಷಿ ದೂರ್ವಾಸರ ಎದುರು ಏನಾದರೂ ಅಯೋಗ್ಯವಾಗಿರುವುದು ಘಟಿಸಿದರೆ ಅಥವಾ ಅವರ ಅನಾದರವಾದರೆ ಅವರು ಕೂಡಲೇ ಸಿಟ್ಟಿಗೊಳಗಾಗುತ್ತಿದ್ದರು. ಹಾಗೂ ಅವರು ಎದುರಿನಲ್ಲಿರುವವನಿಗೆ ಆ ಕ್ಷಣದಲ್ಲೇ ಶಾಪವನ್ನು ಕೊಡುತ್ತಿದ್ದರು. ಮಹರ್ಷಿ ದೂರ್ವಾಸರು ಆಕಸ್ಮಿಕವಾಗಿ ಹಸ್ತಿನಾಪುರಕ್ಕೆ ಆಗಮಿಸಿದ್ದರು. ಆದರೆ ದುರ್ಯೋಧನನು ಅವರಿಗೆ ಯೋಗ್ಯವಾದ ಆದರಾತಿಥ್ಯವನ್ನು ಮಾಡಿದನು. ಅವರ ಸ್ನಾನ, ಸಂಧ್ಯಾ, ಭೋಜನ, ನಿದ್ರೆ ಹಾಗೂ ಯೋಗ್ಯ ಆಯೋಜನೆಗಳನ್ನು ಮಾಡಿ ಅವರನ್ನು ಸತ್ಕರಿಸಿದನು. ಅವರಿಗೆ ಯಾವುದೇ ವಿಷಯದ ಕೊರತೆಯು ಅ